ಭಾನು

III Sem, Electronics and Electrical Engineering

ಸೋರುತಿವೆ ಕನಸುಗಳು ಬಣ್ಣಗಳ ಮಡಿಲಿಂದ
ಬಣ್ಣ ಹಚ್ಚುವರಿಲ್ಲ ತುಮುಲ ಭಾವಗಳಿಂದ
ಕಂಬನಿ ಮಿಡಿಯುತಿದೆ ಎದೆಯ ಕಾಜಾಣ
ಹೇಗೆ ನಾ ಮಾಡಲಿ ಜೋಪಾನ?ಭಾವಹೀನ ಜಗದಲಿ ಬದುಕಲಿ ಹೇಗೆ?
ಕಳೆದ ಕನಸುಗಳ ಹುಡುಕುತ
ನೆನ್ನೆಯ ನೆನಪುಗಳ ಕೂಡಿಡುವೆ ಹಾಗೆ
ಮಡಿದ ಮನವನು ಕೆದಕುತಬಣ್ಣ ಮಾಸಿದ ಬದುಕಿನಗಲ
ಶೂನ್ಯ ಭಾವಗಳ ಚಿತ್ತಾರ;
ಸತ್ತ ಹೆಣದ ನೆತ್ತಿಯ ಮ್ಯಾಲ ಪುಷ್ಪಗುಚ್ಛಗಳ ಅಲಂಕಾರ

ಕನಸು ಕಾಣ್ವ ಕಣ್ಣುಗಳಿಗೆ
ಅಂಧಕಾರದ ಕಡಿವಾಣ
ರಂಗು ರಹಿತ ಸಂಸಾರದೊಳಗೆ
ಖೇದವೊಂದೇ ಬಹುಮಾನ

ಬಯಕೆ ಹೆಣೆದು ಅನುರಾಗ ಅರಸಿ
ಮುಗಿಲಿಗಂದು ಹಾರಿದೆ
ಕನಸು ಕಮರಿ ರೆಕ್ಕೆ ಮುರಿದು
ಶೋಕ ಕೂಪಕೆ ಜಾರಿದೆ

ಪಾಳು ಗುಡಿಯ ಗರ್ಭದಲ್ಲಿ
ದೈವಕುಂಟೆ ಪ್ರಾಥ೯ನೆ!
ಒಂಟಿತನದ ಹಾದಿಯಲ್ಲಿ
ಉಂಟು ನೂರು ಯಾತನೆ

ಭಾವ ರಹಿತ ವಿಶ್ವದಲ್ಲಿ
ಸತ್ತ ಮನದ ಸಂಸ್ಕಾರ
ಶಾಂತಿ ಕೋರಿ ಬಂಧ ಕಳಚಿ
ಇಹಲೋಕದೆಡೆಗೆ ಸಂಚಾರ

Advertisements