ಒಂದು ರೀತಿಯಲ್ಲಿ ಇದು ಪಂಚಾಯಿತಿ ಕಟ್ಟೆ.(ಒಂದು ‘ರೀತಿ’ಯ ಅಲ್ಲ ‘ಒಂದು’ ರೀತಿಯ) ಪಂಚಾಯಿತಿ ಅಂದ ಕೂಡಲೇ ವ್ಯಾಜ್ಯ-ಪಂಚಾಯಿತಿಗೆ ಹೋಗುವ ಅಗತ್ಯವಿಲ್ಲ! ಹರಟೆ ಎಂದೆಣಿಸಿಕೊಳ್ಳಿ. ಕಾಣದ ಕೈಗಳು ಬರೆವ ಕಾಣುವ ಕಥೆ, ಕವನ , ವಿಚಾರಗಳನ್ನು ಬರೆದವರಿಗೆ ಕಾಣದವರು ಓದುವುದು ಎನ್ನಬಹುದೇನೂ!
ಬರೀ ಕಟ್ಟೆಯಲ್ಲ! ಬರೀ ಕಟ್ಟೆಗೆ ಮಾನವನ ಬೇಡಿಕೆಗಳು ನಿಲ್ಲುವುದಿಲ್ಲ. ನೆರಳುಬೇಕಂತೆ. ಗಾಳಿ ಬೇಕಂತೆ. ಆಮ್ಲಜನಕವೂ ಬೇಕಂತೆ. ಮುಂದಿನ ಬೇಡಿಕೆ ಬಂದು, ಪರಿಸ್ಠಿತಿ ಕೈಮೀರುವ ಮೊದಲೇ , ‘ಅರಳಿಕಟ್ಟೆ’
“ಕಟ್ಟೆಯಮೇಲೆ ಕೂತರೆ ಕಟ್ಟೆ ಕಚ್ಚುವುದಿಲ್ಲವೇ ” , ಎಂದ ಸಕ್ಕರೆಯ ಮೈಯ್ಯವರಿಗೆ “ಇಲ್ಲ” ಎನ್ನಲಾಗುತ್ತದೆಯೋ?
ನಿಮ್ಮ ಕಣ್ಣೀರಿನಿಂದ ರಾಡಿಯಾದ ಅಕ್ಷರವಿರುವ ಕವನವೋ, ಖುಷಿಯಲ್ಲಿ ಕಿರುಚುತ್ತಾ ಬರೆದ ಗದ್ಯವೋ! ಎಲ್ಲವನ್ನೋ ಕೇಳಿಸಿಕೊಳ್ಳಲಿದೆ ಅರಳಿಕಟ್ಟೆ!

Advertisements